ಕುಲಪತಿ

10,000 ಜನರನ್ನು ಅನ್ನವಸ್ತ್ರಾದಿಗಳಿಂದ ಪೋಷಿಸಿ, ಅವರಿಗೆ ವಿದ್ಯಾಪ್ರಧಾನ ಮಾಡುವ ಮಹರ್ಷಿ. ನಿದರ್ಶನ ಶೌನಕ. ಮಹಾಭಾರತದ ಆದಿಯಲ್ಲಿ ಇವನ ಉಲ್ಲೇಖವಿದೆ. ಹಿಮವತ್ಪರ್ವತದ ತಪ್ಪಲಲ್ಲಿದ್ದ ಬ್ರಹ್ಮಾಶ್ರಮದ ಅಧಿಪತಿಯನ್ನು, ಚಿತ್ರಕೂಟದಲ್ಲಿದ್ದ ಆಶ್ರಮದ ಪ್ರಧಾನಿಯನ್ನು ಕುಲಪತಿ ಎಂದು ನಿರ್ದೇಶಿಸಲಾಗಿದೆ.
ಈಗ ವಿಶ್ವವಿದ್ಯಾನಿಲಯದ ವೈಸ್-ಛಾನ್ಸಲರನ್ನು ಇದೇ ಹೆಸರಿನಿಂದ ಕರೆಯುವುದಿದೆ.		
	(ಕೆ.ಎಸ್.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ